Surprise Me!

ಕ್ಯಾಲಿಫೊರ್ನಿಯಾವನ್ನು ನರಕವಾಗಿಸಿದ ಭೂಕುಸಿತ | Oneindia Kannada

2018-01-11 1 Dailymotion

ಮೊದಲ ಮಹಾಯುದ್ಧದ ರಣರಂಗದಂತೆ ಕಾಣುತ್ತಿದೆ' ಎಂದು ಭೂಕುಸಿತಕ್ಕೊಳಗಾದ ಅಮೆರಿಕದ ಕ್ಯಾಲಿಫೋರ್ನಿಯಾದ ಮೊಟೆಸಿಟೊವನ್ನು ಸ್ಥಳೀಯರೊಬ್ಬರು ಚಿತ್ರಿಸಿದ್ದರಲ್ಲಿ ಉತ್ಪ್ರೇಕ್ಷೆಯಿಲ್ಲ. ಅಲ್ಲಿನ ಸ್ಥಿತಿ ಅಕ್ಷರಶಃ ರಣರಂಗವೇ ಆಗಿದೆ! ಆದರೆ ಇದು ಎರಡು ಸೇನೆಯ ನಡುವಿನ ಯುದ್ಧವಲ್ಲ, ಪ್ರಕೃತಿ-ಪುರಷನ ನಡುವಿನ ಯುದ್ಧವಷ್ಟೆ! ಅತಿಯಾದ ಮಳೆಯಿಂದಾಗಿ ಮಣ್ಣು ಕುಸಿಯಲಾರಂಭಿಸಿದ್ದರಿಂದ, ನೀರಿನೊಂದಿಗೆ ಕಲೆಸಿಕೊಂಡ ಮಣ್ಣು ಪ್ರವಾಹದ ರೂಪದಲ್ಲಿ ಮುನ್ನುಗ್ಗುತ್ತಿರುವ ದೃಶ್ಯ ಅಲ್ಲಿ ಕಣ್ಣಿಗೆ ರಾಚುತ್ತದೆ. ಇದುವರೆಗೂ 17 ಜನ ಅಸುನೀಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಇಲ್ಲಿನ ವಿಕೋಪ ನಿಯಂತ್ರಣ ಕೇಂದ್ರ ತಿಳಿಸಿದೆ. ನಿರಂತರವಾಗಿ ಹರಿಯುತ್ತಿರುವ ಕೆಸರು ಮಣ್ಣಿನ ಪ್ರವಾಹದಲ್ಲಿ ಹೂತುಹೋದವರೆಷ್ಟು ಜನರೋ! ರಕ್ಷಣಾ ಕಾರ್ಯವೇನೋ ನಿರಂತರವಾಗಿ ನಡೆಯುತ್ತಿದೆ. ಆದರೂ ಮಣ್ಣಿನಲ್ಲಿ ಮಣ್ಣಾಗುತ್ತಿರುವ ಮನೆಗಳು, ಹೂತುಹೋಗುತ್ತಿರುವ ವಾಹನಗಳು, ಬುಡಸಮೇತ ಬೀಳುತ್ತಿರುವ ಮರಗಳು ನಿಸರ್ಗದ ಅಪರಿಮಿತ ಶಕ್ತಿಯನ್ನು ಪ್ರದರ್ಶಿಸುತ್ತಿವೆ. ಆದರೆ ಹೂತುಹೋದ ಮಣ್ಣಿನಲ್ಲೂ ತಣ್ಣನೆ ಉಸಿರಾಡುತ್ತಿರುವ ಜೀವವನ್ನು ಪ್ರಾಣದ ಹಂಗು ತೊರೆದು ರಕ್ಷಿಸುತ್ತಿರುವ ರಕ್ಷಣಾ ಸಿಬ್ಬಂದಿಗಳು ಮಾನವೀಯತೆಯ ಇರುವನ್ನೂ ತೋರಿಸುತ್ತಿದ್ದಾರೆ


South California mudslides , more than 17 dead and hundred homes destroyed